ಅರಸು ಮತ್ತು ರಾಜು ಕ್ಷತ್ರಿಯ ಪ್ರತಿಷ್ಠಾನದಿಂದ  ಸಾಮೂಹಿಕ ಬ್ರಹ್ಮೋಪದೇಶ  ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭ

ಅರಸು ಮತ್ತು ರಾಜು ಕ್ಷತ್ರಿಯ ಪ್ರತಿಷ್ಠಾನದಿಂದ ಸಾಮೂಹಿಕ ಬ್ರಹ್ಮೋಪದೇಶ ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭ

ಬೆಂಗಳೂರು:   ಅರಸು ಮತ್ತು ರಾಜು ಕ್ಷತ್ರಿಯ ಪ್ರತಿಷ್ಠಾನದಿಂದ ಅರಮನೆ ಆವರಣದಲ್ಲಿ ಸಾಮೂಹಿಕ ಬ್ರಹ್ಮೋಪದೇಶ (ಉಪನಯನ) ಮತ್ತು ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭಕರ್ನಾಟಕ ಅರಸು ಮತ್ತು ರಾಜು ಕ್ಷತ್ರಿಯ ಪ್ರತಿಷ್ಠಾನ (ರಿ) ಎಂಬ ಸಂಸ್ಥೆಯನ್ನು ಸ್ಥಾಪಿಸಿ ರಾಜ್ಯದ ಅರಸು ಮತ್ತು ರಾಜು ಕ್ಷತ್ರಿಯರ ಶ್ರೇಯೋಭಿವೃದ್ಧಿಗೆ ಕಾರ್ಯೋನ್ಮುಖರಾಗಿರುವ ಹೆಚ್.ಎನ್.ದಿನೇಶ್ ಅರಸ್ ಮತ್ತು ಪದಾಧಿಕಾರಿಗಳು ಕ್ಷತ್ರಿಯ ಸಮುದಾಯದ ಯುವಕರಿಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಸಾಮೂಹಿಕ ಬ್ರಹ್ಮೋಪದೇಶ ಕಾರ್ಯಕ್ರಮ ಸೇರಿದಂತೆ ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್ ಪ್ರಶಸ್ತಿ ಪ್ರದಾನ ಸಮಾರಂಭ ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ.

ದಿನಾಂಕ 12/07/2026 ರಂದು ಭಾನುವಾರ, ಬೆಳಗ್ಗೆ 8.೦೦ ಗಂಟೆಗೆ, ಗೇಟ್ ನಂ 9. ಪ್ರಿನ್ಸೆಸ್ ಗ್ರೀನ್ ಹಾಲ್, ಅರಮನೆ ಮೈದಾನ ಬೆಂಗಳೂರು ಇಲ್ಲಿ ಹಮ್ಮಿಕೊಂಡಿದ್ದು. ಈ ಕಾರ್ಯಕ್ರಮದ ಘನ ಅಧ್ಯಕ್ಷತೆಯನ್ನು ಮಾನ್ಯ ಶ್ರೀ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್,
ಸಂಸದರು ಮೈಸೂರು ಮತ್ತು ಕೊಡಗು ಲೋಕಸಭಾ ಕ್ಷೇತ್ರ ಹಾಗೂ ಶ್ರೀಮನ್ಮಾಹಾರಾಜರು ಮೈಸೂರು ಮಹಾ ಸಂಸ್ಥಾನ. ಶ್ರೀಯುತರು ವಹಿಸಲಿದ್ದಾರೆ.

ಸಮಾರಂಭದ ಉದ್ಘಾಟನೆಯನ್ನು ಮಾನ್ಯ ಶ್ರೀ ಎಚ್.ಡಿ.ಕುಮಾರಸ್ವಾಮಿ ಅವರು ಭಾರಿ ಕೈಗಾರಿಕೆ ಹಾಗೂ ಉಕ್ಕಿನ ಕೇಂದ್ರ ಸಚಿವರು. ಮಾಜಿ ಮುಖ್ಯ ಮಂತ್ರಿಗಳು ಕರ್ನಾಟಕ ಸರ್ಕಾರ. ಅವರು ನೆರವೇರಿಸಲಿದ್ದಾರೆ.

ಕಾರ್ಯಕ್ರಮದ ಘನ ಉಪಸ್ಥಿತರಾಗಿ ಮಾನ್ಯ ಶ್ರೀ ವಿ.ಸೋಮಣ್ಣ ನವರು ರಾಜ್ಯ ಉಸ್ತುವಾರಿ ಸಚಿವರು, ರೈಲ್ವೆ ಮತ್ತು ಜಲ ಶಕ್ತಿ ಇಲಾಖೆ ಭಾರತ ಸರ್ಕಾರ. ಮತ್ತು ಮಾನ್ಯ ಶ್ರೀ ಬೋಸರಾಜು ಅವರು ಜನಪ್ರಿಯ ಶಾಸಕರು ಮತ್ತು ಮಾಜಿ ಸಚಿವರು ಹಾಗೂ ರಾಜು ಕ್ಷತ್ರಿಯ ಜನಾಂಗದ ಮುಖಂಡರು, ವಹಿಸಲಿದ್ದಾರೆ.

ಬ್ರಹ್ಮೋಪನಯನದ ದಿವ್ಯ ಸಾನಿಧ್ಯವನ್ನು ಪರಮಪೂಜ್ಯ ಶ್ರೀ ಎಂ.ಎಲ್. ವರ್ಚಸ್ವಿನ್ ಶ್ರೀಕಂಠ ಸಿದ್ಧಲಿಂಗರಾಜೇ ಅರಸ್ ಅವರು ಮಠಾಧಿಪತಿಗಳು, ಶ್ರೀ ಕ್ಷೇತ್ರ ಶ್ರೀ ಮಂಟೇಸ್ವಾಮಿ ಮಠ, ಮಳವಳ್ಳಿ ಹಾಗು ಶ್ರೀ ಕ್ಷೇತ್ರ ಕಪ್ಪಡಿ ಮತ್ತು ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರ ಮೊಮ್ಮಕ್ಕಳು ಆದ ಇವರು ಇವರು ವಹಿಸಲಿದ್ದಾರೆ.

 

Comments

No comments yet. Why don’t you start the discussion?

Leave a Reply

Your email address will not be published. Required fields are marked *